Monday 1 June 2015

ಪ್ರವೇಶೋತ್ಸವ 2015

“ಹೊಸ ಶೈಕ್ಷಣಿಕ ವರ್ಷ ಆರಂಭವಾಗುತ್ತಿದೆ. ಅನೇಕ ಮಂದಿ ವಿದ್ಯಾರ್ಥಿಗಳು ಇಂದು ಶಾಲೆಯ ಮೆಟ್ಟಿಲನ್ನು ಹೊಸದಾಗಿ ಹತ್ತುತ್ತಿದ್ದಾರೆ. ಈ ರೀತಿಯ ಮೆರವಣಿಗೆ ಮತ್ತು ಪ್ರವೇಶೋತ್ಸವ ಕಾರ್ಯಕ್ರಮಗಳು ಅಳುವ ಮಕ್ಕಳಿಗೆ ಆಕರ್ಷಣೆಯನ್ನು ನೀಡಿ ಅವರು ಹಸನ್ಮುಖರಾಗಿ ಶಾಲೆಗೆ ಬರುವಂತೆ ಮಾಡುವಲ್ಲಿ ಸಹಕಾರಿಯಾಗುತ್ತದೆ. ವಿದ್ಯಾಲಯದಲ್ಲಿ ಚೆನ್ನಾಗಿ ಕಲಿತು ವಿದ್ಯಾರ್ಥಿಗಳ ಬಾಳು ಹಸನಾಗಲಿ" ಎಂದು ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯೆ ಸೌಮ್ಯಾ ಮಹೇಶ್ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ಜರಗಿದ ನೂತನ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ನಿರ್ವಹಿಸಿ ಮಾತನಾಡುತ್ತಿದ್ದರು.
ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಚಂದ್ರಹಾಸ ರೈ, ಶಿಕ್ಷಕರಾದ ಚಂದ್ರಶೇಖರ ರೈ, ಮಾಲತಿ.ವೈ, ಲಲಿತಕುಮಾರಿ.ಎನ್.ಎಚ್, ಶೃತಿ, ಜಯಶ್ರೀ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಎಚ್.ಎನ್. ಮೀನಾಕ್ಷಿ ಸ್ವಾಗತಿಸಿದರು. ಶಿಕ್ಷಕಿ ಮಾಲತಿ.ಎಂ ಧನ್ಯವಾದ ಸಮರ್ಪಿಸಿದರು. ಬೆಲೂನ್ ಮತ್ತು ಟೊಪ್ಪಿಗಳೊಂದಿಗೆ ನವವಿದ್ಯಾರ್ಥಿಗಳ ಆಕರ್ಷಕ ಮೆರವಣಿಗೆ ನಡೆಯಿತು. ಕಲಿಕೋಪಕರಣ ಮತ್ತು ಸಿಹಿತಿಂಡಿಗಳನ್ನು ವಿತರಿಸಲಾಯಿತು.

No comments:

Post a Comment