Tuesday 30 June 2015

ಮಾದಕ ವಸ್ತು ವಿರುದ್ದದಿನ

ಜೂನ್ 26 -ಈ ದಿನ ಮನುಕುಲವನ್ನು ನಾಶಪಡಿಸುವ ಮಾದಕವಸ್ತುಗಳ ಸೇವನೆಯ ವಿರುದ್ದ
ಜನರನ್ನು ಎಚ್ಹರಿಸುವ ಕಾರ್ಯಕ್ರಮಗಳು ಎಲ್ಲೆಡೆ ನಡೆದುವು. ನಮ್ಮ ಶಾಲೆಯಲ್ಲಿ ಮಕ್ಕಳಿಗೆ
ಮಾದಕವಸ್ತುಗಳ ಸೇವನೆಯಿಂದ ಆಗುವ ಕೆಟ್ಟ ಪರಿಣಾಮಗಳ ಬಗ್ಗೆ    ಮಾಹಿತಿನೀಡಲಾಯಿತು .
ಆ ಕುರಿತು ಪ್ರತಿಜ್ಞೆಯನ್ನು ಮಾಡಲಾಯಿತು .

Saturday 20 June 2015

ವಾಚಾನಾದಿನ

ಜೂನ್೧೯ಗ್ರಂಥಾಲಯ ಚಳುವಳಿಯ ಪಿತಾಮಹ
ಪಿ.ಯನ್.ಪಣಿಕ್ಕರ್ರವರ ಚರಮದಿನ. "ಓದಿರಿ ಹಾಗು ಬೆಳೆಯಿರಿ"
ಎಂಬುದು ಅವರ ಸಂದೇಶವಾಗಿತ್ತು.
ಈವಾರವನ್ನು "ವಾಚನಸಪ್ತಾಹ" ವಾಗಿ ನಮ್ಮಶಾಲೆಯಲ್ಲಿ ಆಚರಿಸಲಾಗುವುದು.
ಇದರ ಉದ್ಘಾಟನೆಯನ್ನು ಮುಖ್ಯೋಪಾಧ್ಯಾಯಿನಿ ಶ್ರೀಮತಿ
ಮೀನಾಕ್ಷಿಯವರು ನೆರವೇರಿಸಿದರು. ಶ್ರೀಯುತ ಚಂದ್ರಶೇಖರ ರೈಯವರು
ಈ ಕಾರ್ಯಕ್ರಮದ ಮಹತ್ವವನ್ನು ಮಕ್ಕಳಿಗೆ ತಿಳಿಯಪಡಿಸಿದರು.







Tuesday 9 June 2015

ಕನ್ನಡದ ಕಟ್ಟಾಳು ಕವಿ ಕಯ್ಯಾರರ ಜನ್ಮದಿನ

ಹಿರಿಯ ಕವಿಗಳ ರಚನೆಗಳನ್ನು ಓದುವುದರಿಂದ ಮತ್ತು
ಅವರ ಜೀವನ ಚರಿತ್ರೆಗಳನ್ನು ತಿಳಿದುಕೊಳ್ಳುವುದರಿಂದ
ಮಕ್ಕಳು ಸಾಹಿತ್ಯದ ಬಗ್ಗೆ ಹೆಚ್ಚಿನ ಅನುಭವಗಳನ್ನು ಗಳಿಸಿಕೊಳ್ಳಲು
ಸಾಧ್ಯ ,ಅಲ್ಲದೆ ಸಾಹಿತ್ಯವು ಜೀವನವನ್ನು ಸುಂದರಗೊಳಿಸುತ್ತದೆ.
ಕವಿ ಕಯ್ಯಾರರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ನಮ್ಮ ಶಾಲಾ
ಅಧ್ಯಾಪಕರಾದ ಶ್ರೀಯುತ ಚಂದ್ರಶೇಖರ ರೈಯವರು ಮಕ್ಕಳಿಗೆ
ಕಯ್ಯಾರರ ಕುರಿತು ಹೆಚ್ಚಿನ ಮಾಹಿತಿಗಳನ್ನು ನೀಡುತ್ತಾ ಹೇಳಿದರು .
ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮೀನಾಕ್ಷಿಯವರು ಮತ್ತು ಇತರ
ಅಧ್ಯಾಪಿಕೆಯರು ಹಾಜರಿದ್ದರು .

Friday 5 June 2015

ವಿಶ್ವಪರಿಸರದಿನ

"ನಮ್ಮ ಹಿರಿಯರು ನಮಗಾಗಿ ಸಂರಕ್ಷಿಸಿ ಉಳಿಸಿ ಬೆಳೆಸಿದ
ಪ್ರಕೃತಿ ಸಂಪತ್ತು ಇಂದು ನಾಶವಾಗುವ ಸ್ಥಿತಿ ಬಂದೊದಗಿದೆ .
ಇದಕ್ಕೆ ನಾವೇ ಕಾರಣರಾಗಿದ್ದೇವೆ . ಇನ್ನಾದರೂ ನಾವು ಜಾಗ್ರತರಾಗಬೇಕಾಗಿದೆ.
ಇಂದಿನ ಮಕ್ಕಳೇ ಮುಂದಿನ ಜನಾಂಗ , ಅಂತೆಯೇ ಪ್ರತಿಯೊಬ್ಬರೂ ಒಂದೊಂದು
ಗಿಡವನ್ನು ನೆಟ್ಟು ಬೆಳೆಸ ಬೇಕು" .ಪರಿಸರ ದಿನಕ್ಕೆ ಸಂಬಂಧಪಟ್ಟ ಆಚರಣೆಯ ಸಂದರ್ಭ
ನಮ್ಮ ಶಾಲಾ ಅಧ್ಯಾಪಕರಾದ ಶ್ರೀಯುತ ಚಂದ್ರಶೇಖರ ರೈ ಯವರು ಪುಟಾಣಿ
ಮಕ್ಕಳಿಗೆ ತಿಳಿಸಿದರು .   ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮೀನಾಕ್ಷಿಯವರು
ಎಲ್ಲಾ ಮಕ್ಕಳಿಗೂ ಗಿಡಗಳನ್ನು ವಿತರಿಸಿದರು .

Monday 1 June 2015

ಪ್ರವೇಶೋತ್ಸವ 2015

“ಹೊಸ ಶೈಕ್ಷಣಿಕ ವರ್ಷ ಆರಂಭವಾಗುತ್ತಿದೆ. ಅನೇಕ ಮಂದಿ ವಿದ್ಯಾರ್ಥಿಗಳು ಇಂದು ಶಾಲೆಯ ಮೆಟ್ಟಿಲನ್ನು ಹೊಸದಾಗಿ ಹತ್ತುತ್ತಿದ್ದಾರೆ. ಈ ರೀತಿಯ ಮೆರವಣಿಗೆ ಮತ್ತು ಪ್ರವೇಶೋತ್ಸವ ಕಾರ್ಯಕ್ರಮಗಳು ಅಳುವ ಮಕ್ಕಳಿಗೆ ಆಕರ್ಷಣೆಯನ್ನು ನೀಡಿ ಅವರು ಹಸನ್ಮುಖರಾಗಿ ಶಾಲೆಗೆ ಬರುವಂತೆ ಮಾಡುವಲ್ಲಿ ಸಹಕಾರಿಯಾಗುತ್ತದೆ. ವಿದ್ಯಾಲಯದಲ್ಲಿ ಚೆನ್ನಾಗಿ ಕಲಿತು ವಿದ್ಯಾರ್ಥಿಗಳ ಬಾಳು ಹಸನಾಗಲಿ" ಎಂದು ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯೆ ಸೌಮ್ಯಾ ಮಹೇಶ್ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ಜರಗಿದ ನೂತನ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ನಿರ್ವಹಿಸಿ ಮಾತನಾಡುತ್ತಿದ್ದರು.
ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಚಂದ್ರಹಾಸ ರೈ, ಶಿಕ್ಷಕರಾದ ಚಂದ್ರಶೇಖರ ರೈ, ಮಾಲತಿ.ವೈ, ಲಲಿತಕುಮಾರಿ.ಎನ್.ಎಚ್, ಶೃತಿ, ಜಯಶ್ರೀ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಎಚ್.ಎನ್. ಮೀನಾಕ್ಷಿ ಸ್ವಾಗತಿಸಿದರು. ಶಿಕ್ಷಕಿ ಮಾಲತಿ.ಎಂ ಧನ್ಯವಾದ ಸಮರ್ಪಿಸಿದರು. ಬೆಲೂನ್ ಮತ್ತು ಟೊಪ್ಪಿಗಳೊಂದಿಗೆ ನವವಿದ್ಯಾರ್ಥಿಗಳ ಆಕರ್ಷಕ ಮೆರವಣಿಗೆ ನಡೆಯಿತು. ಕಲಿಕೋಪಕರಣ ಮತ್ತು ಸಿಹಿತಿಂಡಿಗಳನ್ನು ವಿತರಿಸಲಾಯಿತು.