Wednesday 16 December 2015

ಇಂಧನ ಉಳಿಸಿ

ನೀರ್ಚಾಲು:- ಮ.ಸಂ.ಕಾಲೇಜ್ ಎಲ್.ಪಿ.ಶಾಲೆ ಪೆರಡಾಲ ನೀರ್ಚಾಲು ಶಾಲೆಯ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು
ಇಂಧನ ಉಳಿಸಿ ಪ್ರತಿಜ್ಞೆ ಮಾಡಿದರು.

ಕುಂಬಳೆ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ತೃತೀಯ

ನೀರ್ಚಾಲು :- ಕುಂಬಳೆ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಪೆನ್ಸಿಲ್ ಡ್ರೋಯಿಂಗ್  ನಲ್ಲಿ ಎ+ನೊಂದಿಗೆ ತೃತೀಯ ಸ್ಥಾನ ಪಡೆದ ಭರತ್ ರಾಜ್. ಕೆ 4 ನೇ ತರಗತಿ. ಶಾಲಾ ಮುಖ್ಯೋಪಾಧ್ಯಾಯಿನಿ ಹಾಗೂ ಅಧ್ಯಾಪಕ ವೃಂದ ಇವನನ್ನು ಅಭಿನಂದಿಸಿದ್ದಾರೆ.

Wednesday 2 December 2015

ಬಾಲಕಲೋತ್ಸವ


ಭಾಷಣ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದ ವಿದ್ಯಾರ್ಥಿನಿ
ಸ್ವಾತಿ ಕೆ ನಾಲ್ಕನೇ ತರಗತಿ

ವಿಜ್ಞಾನ ಮೇಳ ಹಾಗೂ ಗಣಿತ ಮೇಳ

ವಿಜ್ಞಾನ ರಸಪ್ರಶ್ನೆಯಲ್ಲಿ ದ್ವಿತೀಯ ಬಹುಮಾನ ಪಡೆದ ವಿದ್ಯಾರ್ಥಿ 
ಕೃಪಾನಿಧಿ.ಕೆ ನಾಲ್ಕನೇ ತರಗತಿ





Saturday 3 October 2015

ಗಾಂಧಿ ಜಯಂತಿ

ಗಾಂಧಿ ಜಯಂತಿ ಆಚರಣೆಯ ಕೆಲವು ನೋಟಗಳು .




ಹಿರಿಯನಾಗರಿಕರ ದಿನ

ಹಿರಿಯ ನಾಗರಿಕರೂ ನಿವೃತ್ತ ಅಧ್ಯಾಪಕರೂ ಆದ
ಶ್ರೀಯುತ ಸಂಕಪ್ಪ ಪೂಜಾರಿ ಯವರು ತಮ್ಮ ಬಾಲ್ಯ ,
ಆರಂಭದ ವೃತ್ತಿ ಜೀವನ ಮತ್ತು ಇಂದಿನ ಮಕ್ಕಳ ಬಾಲ್ಯ ,ಜೀವನ
ವಿಧಾನಗಳನ್ನು ಪರಸ್ಪರ ವಿಶ್ಲೇಷಣೆ ಮಾಡಿ ,ಇಂದಿನ ಮಕ್ಕಳಲ್ಲಿ
ಹಿರಿಯರ ಕುರಿತು ಗೌರವ ಕಡಿಮೆಯಾಗುವ ಮನಸ್ಥಿತಿ ಬೆಳೆಯುತ್ತಿರುವ
ಬಗ್ಗೆ ಕಳವಳ ವ್ಯಕ್ತ ಪಡಿಸಿದರು . ಹಿರಿಯರನ್ನು ಪ್ರೀತಿಸಿ ,ಗೌರವಿಸುವ
ಮನೋ ಭಾವ ಬೆಳೆಸಿಕೊಳ್ಳುವಂತೆ ಮಕ್ಕಳಿಗೆ ಕರೆಯಿತ್ತರು .
ಮಕ್ಕಳು ಆ ಬಗ್ಗೆ ಪ್ರತಿಜ್ಞೆ ಸ್ವೀಕಾರ ಮಾಡಿದರು .



Monday 7 September 2015

ಔಷಧೀಯ ಸಸ್ಯತೋಟ

ನಮ್ಮಶಾಲೆಯ ತೋಟದಲ್ಲಿ ಹಲವಾರು ಉಪಯುಕ್ತ
ಸಸ್ಯಗಳು ಇವೆ.


ಅಧ್ಯಾಪಕ ದಿನಾಚರಣೆ

ನಮ್ಮ ಶಾಲಾಮಕ್ಕಳು ಪ್ರೀತಿಯಿಂದ ಅಧ್ಯಾಪಕರನ್ನು ಗುಲಾಬಿಹೂಗಳನ್ನಿತ್ತು
ಗೌರವಿಸಿದರು.

Saturday 5 September 2015

ಮೌಲ್ಯಮಾಪನ

ಪ್ರಸಕ್ತ ವರ್ಷದ ಪ್ರಥಮ ಹಂತದ ಮೌಲ್ಯ ಮಾಪನ ಸೋಮವಾರ ಆರಂಭಗೊಳ್ಳಲಿದೆ

Friday 21 August 2015

ಓಣಂ ಆಚರಣೆ

ಓಣಂ ಪ್ರಯುಕ್ತ ನಮ್ಮ ಮಕ್ಕಳ ಹೂವಿನ ರಂಗೋಲಿ .



ನಾಳೆ ಓಣಂ ಪಾಯಸದೂಟ .

Wednesday 19 August 2015

ಸಮವಸ್ತ್ರ ವಿತರಣೆ

ಸರ್ಕಾರದಿಂದ ಕೊಡಮಾಡಲ್ಪಟ್ಟ ಸಮವಸ್ತ್ರಗಳನ್ನು
ನಮ್ಮ ಶಾಲಾ ವ್ಯವಸ್ಥಾಪಕರು  ಮಕ್ಕಳಿಗೆ ವಿತರಿಸಿದರು.

 ಪಿ.ಟಿ.ಎ .ಸದಸ್ಯರುಗಳು ಹಾಜರಿದ್ದರು.
ಪ್ರತಿಯೊಂದು ಮಗುವಿಗೂ ಎರಡು ಪ್ರತಿಗಳನ್ನು
ನೀಡಲಾಯಿತು.[ ಹೆಣ್ಣುಮಕ್ಕಳು, ಎಸ್.ಸಿ. ,ಎಸ್.ಟಿ.ಮತ್ತು
ಬಿ.ಪಿ.ಎಲ್ ಹುಡುಗರಿಗೆ ಮಾತ್ರ ]

Friday 7 August 2015

Wednesday 5 August 2015

ಶಾಂತಿಸಮಾಜ

ನಮ್ಮ ಶಾಲೆಯ ಚಟುವಟಿಕೆಗಳನ್ನೆಲ್ಲ ಸುಗಮವಾಗಿ
ನಡೆಸಲು ಜುಲೈ೩೧ನೆಯ ತಾರೀಖಿನಂದು "ಶಾಂತಿ ಸಮಾಜ" ವನ್ನು
ರೂಪೀಕರಿಸಲಾಯಿತು.
ವಿದ್ಯಾರ್ಥಿನಾಯಕನಾಗಿ ಕೃಪಾನಿಧಿ.ಕೆ,ಸಹಾಯಕಿಯಾಗಿ ಫ್ಹಾತಿಮತ್ ಅಲ್ಫಿನಾ
ಸಾಂಸ್ಕ್ರತಿಕ ಮಂತ್ರಿಯಾಗಿ ಸ್ವಾತಿ.ಪಿ ,ಸಹಾಯಕಿಯಾಗಿ ಭಾವನಾ .ಕೆ,
ಆರೋಗ್ಯಮಂತ್ರಿಯಾಗಿ ಅನಘ.ಟಿ.,ಸಹಾಯಕಿಯಾಗಿ ಯಶಸ್ವಿನಿ,
ಕೃಷಿಮಂತ್ರಿ ಜಿತೇಶ್,ಸಹಾಯಕ ಬಿ.ಪಿ.ನಿಖಿಲ್ .ಆಯ್ಕೆಗೊಂಡರು.
ಸದಸ್ಯರಿಂದ ಪ್ರತಿಜ್ಞಾ ಸ್ವೀಕಾರ , ಶ್ರೀಯುತ ಚಂದ್ರಶೇಖರ ರೈಯವರು
ಪ್ರತಿಜ್ಞಾವಿಧಿಗಳನ್ನು ಭೋಧಿ ಸಿದರು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮೀನಾಕ್ಷಿಯವರು
ಉಪಸ್ಥಿತರಿದ್ದರು.


Thursday 30 July 2015

ತರಗತಿ ಚಟುವಟಿಕೆಗಳು



ಉತ್ಪನ್ನಗಳು

ತರಗತಿ ಚಟುವಟಿಕೆಗಳ ಉತ್ಪನ್ನಗಳು

ಪಿ.ಟಿ.ಎ ಮಹಾಸಭೆ

ಜುಲೈ29ರಂದು ಮಧ್ಯಾಹ್ನ 2.30ಕ್ಕೆಸರಿಯಾಗಿ ಪಿ.ಟಿ.ಎ.
ಮಹಾಸಭೆ ಜರಗಿತು.
ಅಧ್ಯಕ್ಷರು-ಶ್ರೀ ಚಂದ್ರಹಾಸರೈ ,ಮಾತ್ಹೃಸಂಘದ ಅಧ್ಯಕ್ಷೆಯಾದ ಶ್ರೀಮತಿ ಲಕ್ಷ್ಮಿ
ಶಾಲಾವ್ಯವಸ್ತಾಪಕರಾದ ಶ್ರೀ ಜಯದೇವ್ ಖಂಡಿಗೆ, ಉಪಸ್ಥಿತರಿದ್ದರು.
ಹೊಸಕಾರ್ಯಕಾರಿ ಸಮಿತಿ ರೂಪೀಕರಿಸಲಾಯಿತು.
ಅಧ್ಯಕ್ಷರಾಗಿ ಶ್ರೀಚಂದ್ರಹಾಸ ರೈಯವರನ್ನೇ ನಿಯೋಜಿಸಲಾಯಿತು.
ಮಾತ್ರುಸಂಘದ ಅಧ್ಯಕ್ಷೆಯಾಗಿ ಶ್ರೀಮತಿ ಹೆಮಾವತಿಯವರನ್ನು ಆಯ್ಕೆ
ಮಾಡಲಾಯಿತು.ಅಲ್ಲದೆ ಮಧ್ಯಾಹ್ನ ಭೋಜನ ಕಮಿಟಿ ರೂಪೀಕರಿಸಲಾಯಿತು.
ಬಳಿಕ ಮಕ್ಕಳ ಹಿತಕ್ಕಾಗಿ ,ಉತ್ತಮ ಕಲಿಕೆಗಾಗಿ ,ಕೆಲವು ಯೋಜನೆಗಳನ್ನು
ಹಾಕಿ ಕೊಳ್ಳಲಾಯಿತು.
ಮುಖ್ಯೋಪಾಧ್ಯಾಯಿನಿ ಶ್ರೀಮತಿಮೀನಾಕ್ಷಿಯವರು ಸ್ವಾಗತಿಸಿ ಅಧ್ಯಾಪಿಕೆ
ಶ್ರೀಮತಿ ಮಾಲತಿ ಯಂ.ಧನ್ಯವಾದಗಳನ್ನಿತ್ತರು. ಶ್ರೀಮತಿ ಲಲಿತಕುಮಾರಿ
ಪ್ರಾರ್ಥನೆ ಮಾಡಿದರು. ಶ್ರೀಚಂದ್ರಶೇಖರ ರೈಯವರು ಕಾರ್ಯಕ್ರಮ ನಿರೂಪಿಸಿದರು.






School Diary

ಪಂಚಾಯತ್ನಿಂದ ಕೊಡಮಾಡಲ್ಪಟ್ಟ ಡೈರಿ ಪುಸ್ತಕಗಳನ್ನು
ಮಕ್ಕಳಿಗೆಲ್ಲ ಒಂದರಂತೆ ವಿತರಿಸಲಾಯಿತು.



Monday 27 July 2015

ಪಿ.ಟಿ.ಎ ಮಹಾಸಭೆ

ಜುಲೈ೨೯ರಂದು ಅಪರಾಹ್ನ 2 ಗಂಟೆಗೆ ನಮ್ಮಶಾಲೆಯ
ಪಿ.ಟಿ.ಎ.ಮಹಾಸಭೆ ನಡೆಸುವುದೆಂದು ಕಾರ್ಯಕಾರಿಸಮಿತಿಯಲ್ಲಿ
ತೀರ್ಮಾನಿಸಲಾಗಿದೆ.

Wednesday 22 July 2015

ವಿದ್ಯಾರಂಗ ಉದ್ಘಾಟನೆ

ಆಸಕ್ತಿದಾಯಕ ಕತೆಯನ್ನು ಹೇಳಿ ವಿನೂತನವಾಗಿ
ಪ್ರಸಕ್ತಸಾಲಿನ ವಿದ್ಯಾರಂಗಕಲಾಸಾಹಿತ್ಯ ವೇದಿಕೆಯ
ಉದ್ಘಾಟನೆಯನ್ನು ಶ್ರೀಯುತ ಬಾಲಮಧುರಕಾನನ
ಅವರು ಇಂದು ನೆರವೇರಿಸಿದರು. ಮುಖ್ಯೋಪಾಧ್ಯಾಯಿನಿ
ಶ್ರೀಮತಿ ಮೀನಾಕ್ಷಿಯವರು ಸ್ವಾಗತಿಸಿದರು .ಶ್ರೀಯುತ
ಚಂದ್ರಶೇಖರ ರೈಯವರು ಧನ್ಯವಾದಗಳನ್ನಿತ್ತರು. ಶ್ರೀಮತಿ ಮಾಲತಿ
ವೈಯವರು ಕಾರ್ಯಕ್ರಮ ನಿರೂಪಿಸಿದರು.
ಮಕ್ಕಳಿಂದ ವಿವಿಧ ಕಾರ್ಯಕ್ರಮಗಳು ಜರಗಿದವು.





Sunday 19 July 2015

ಸಿಪಿಟಿಎ

ಜೂನ್೧೪ ರಿಂದ ಆರಂಭಿಸಿ ನಮ್ಮಎಲ್ಲಾತರಗತಿಗಳ
ಸಿಪಿಟಿಎ ಗಳು ಸಂಪನ್ನಗೊಂಡವು. ಪ್ರತಿತರಗತಿಗಳ
ಅಧ್ಯಕ್ಷರನ್ನು ,ಉಪಾಧ್ಯಕ್ಷರನ್ನು ಚುನಾಯಿಸಲಾಯಿತು.
ಮಕ್ಕಳ ಕಲಿಕಾಪ್ರಗತಿಯ ಕುರಿತು ಚರ್ಚಿಸಲಾಯಿತು.

Tuesday 30 June 2015

ಮಾದಕ ವಸ್ತು ವಿರುದ್ದದಿನ

ಜೂನ್ 26 -ಈ ದಿನ ಮನುಕುಲವನ್ನು ನಾಶಪಡಿಸುವ ಮಾದಕವಸ್ತುಗಳ ಸೇವನೆಯ ವಿರುದ್ದ
ಜನರನ್ನು ಎಚ್ಹರಿಸುವ ಕಾರ್ಯಕ್ರಮಗಳು ಎಲ್ಲೆಡೆ ನಡೆದುವು. ನಮ್ಮ ಶಾಲೆಯಲ್ಲಿ ಮಕ್ಕಳಿಗೆ
ಮಾದಕವಸ್ತುಗಳ ಸೇವನೆಯಿಂದ ಆಗುವ ಕೆಟ್ಟ ಪರಿಣಾಮಗಳ ಬಗ್ಗೆ    ಮಾಹಿತಿನೀಡಲಾಯಿತು .
ಆ ಕುರಿತು ಪ್ರತಿಜ್ಞೆಯನ್ನು ಮಾಡಲಾಯಿತು .

Saturday 20 June 2015

ವಾಚಾನಾದಿನ

ಜೂನ್೧೯ಗ್ರಂಥಾಲಯ ಚಳುವಳಿಯ ಪಿತಾಮಹ
ಪಿ.ಯನ್.ಪಣಿಕ್ಕರ್ರವರ ಚರಮದಿನ. "ಓದಿರಿ ಹಾಗು ಬೆಳೆಯಿರಿ"
ಎಂಬುದು ಅವರ ಸಂದೇಶವಾಗಿತ್ತು.
ಈವಾರವನ್ನು "ವಾಚನಸಪ್ತಾಹ" ವಾಗಿ ನಮ್ಮಶಾಲೆಯಲ್ಲಿ ಆಚರಿಸಲಾಗುವುದು.
ಇದರ ಉದ್ಘಾಟನೆಯನ್ನು ಮುಖ್ಯೋಪಾಧ್ಯಾಯಿನಿ ಶ್ರೀಮತಿ
ಮೀನಾಕ್ಷಿಯವರು ನೆರವೇರಿಸಿದರು. ಶ್ರೀಯುತ ಚಂದ್ರಶೇಖರ ರೈಯವರು
ಈ ಕಾರ್ಯಕ್ರಮದ ಮಹತ್ವವನ್ನು ಮಕ್ಕಳಿಗೆ ತಿಳಿಯಪಡಿಸಿದರು.