Thursday 30 July 2015

ತರಗತಿ ಚಟುವಟಿಕೆಗಳು



ಉತ್ಪನ್ನಗಳು

ತರಗತಿ ಚಟುವಟಿಕೆಗಳ ಉತ್ಪನ್ನಗಳು

ಪಿ.ಟಿ.ಎ ಮಹಾಸಭೆ

ಜುಲೈ29ರಂದು ಮಧ್ಯಾಹ್ನ 2.30ಕ್ಕೆಸರಿಯಾಗಿ ಪಿ.ಟಿ.ಎ.
ಮಹಾಸಭೆ ಜರಗಿತು.
ಅಧ್ಯಕ್ಷರು-ಶ್ರೀ ಚಂದ್ರಹಾಸರೈ ,ಮಾತ್ಹೃಸಂಘದ ಅಧ್ಯಕ್ಷೆಯಾದ ಶ್ರೀಮತಿ ಲಕ್ಷ್ಮಿ
ಶಾಲಾವ್ಯವಸ್ತಾಪಕರಾದ ಶ್ರೀ ಜಯದೇವ್ ಖಂಡಿಗೆ, ಉಪಸ್ಥಿತರಿದ್ದರು.
ಹೊಸಕಾರ್ಯಕಾರಿ ಸಮಿತಿ ರೂಪೀಕರಿಸಲಾಯಿತು.
ಅಧ್ಯಕ್ಷರಾಗಿ ಶ್ರೀಚಂದ್ರಹಾಸ ರೈಯವರನ್ನೇ ನಿಯೋಜಿಸಲಾಯಿತು.
ಮಾತ್ರುಸಂಘದ ಅಧ್ಯಕ್ಷೆಯಾಗಿ ಶ್ರೀಮತಿ ಹೆಮಾವತಿಯವರನ್ನು ಆಯ್ಕೆ
ಮಾಡಲಾಯಿತು.ಅಲ್ಲದೆ ಮಧ್ಯಾಹ್ನ ಭೋಜನ ಕಮಿಟಿ ರೂಪೀಕರಿಸಲಾಯಿತು.
ಬಳಿಕ ಮಕ್ಕಳ ಹಿತಕ್ಕಾಗಿ ,ಉತ್ತಮ ಕಲಿಕೆಗಾಗಿ ,ಕೆಲವು ಯೋಜನೆಗಳನ್ನು
ಹಾಕಿ ಕೊಳ್ಳಲಾಯಿತು.
ಮುಖ್ಯೋಪಾಧ್ಯಾಯಿನಿ ಶ್ರೀಮತಿಮೀನಾಕ್ಷಿಯವರು ಸ್ವಾಗತಿಸಿ ಅಧ್ಯಾಪಿಕೆ
ಶ್ರೀಮತಿ ಮಾಲತಿ ಯಂ.ಧನ್ಯವಾದಗಳನ್ನಿತ್ತರು. ಶ್ರೀಮತಿ ಲಲಿತಕುಮಾರಿ
ಪ್ರಾರ್ಥನೆ ಮಾಡಿದರು. ಶ್ರೀಚಂದ್ರಶೇಖರ ರೈಯವರು ಕಾರ್ಯಕ್ರಮ ನಿರೂಪಿಸಿದರು.






School Diary

ಪಂಚಾಯತ್ನಿಂದ ಕೊಡಮಾಡಲ್ಪಟ್ಟ ಡೈರಿ ಪುಸ್ತಕಗಳನ್ನು
ಮಕ್ಕಳಿಗೆಲ್ಲ ಒಂದರಂತೆ ವಿತರಿಸಲಾಯಿತು.



Monday 27 July 2015

ಪಿ.ಟಿ.ಎ ಮಹಾಸಭೆ

ಜುಲೈ೨೯ರಂದು ಅಪರಾಹ್ನ 2 ಗಂಟೆಗೆ ನಮ್ಮಶಾಲೆಯ
ಪಿ.ಟಿ.ಎ.ಮಹಾಸಭೆ ನಡೆಸುವುದೆಂದು ಕಾರ್ಯಕಾರಿಸಮಿತಿಯಲ್ಲಿ
ತೀರ್ಮಾನಿಸಲಾಗಿದೆ.

Wednesday 22 July 2015

ವಿದ್ಯಾರಂಗ ಉದ್ಘಾಟನೆ

ಆಸಕ್ತಿದಾಯಕ ಕತೆಯನ್ನು ಹೇಳಿ ವಿನೂತನವಾಗಿ
ಪ್ರಸಕ್ತಸಾಲಿನ ವಿದ್ಯಾರಂಗಕಲಾಸಾಹಿತ್ಯ ವೇದಿಕೆಯ
ಉದ್ಘಾಟನೆಯನ್ನು ಶ್ರೀಯುತ ಬಾಲಮಧುರಕಾನನ
ಅವರು ಇಂದು ನೆರವೇರಿಸಿದರು. ಮುಖ್ಯೋಪಾಧ್ಯಾಯಿನಿ
ಶ್ರೀಮತಿ ಮೀನಾಕ್ಷಿಯವರು ಸ್ವಾಗತಿಸಿದರು .ಶ್ರೀಯುತ
ಚಂದ್ರಶೇಖರ ರೈಯವರು ಧನ್ಯವಾದಗಳನ್ನಿತ್ತರು. ಶ್ರೀಮತಿ ಮಾಲತಿ
ವೈಯವರು ಕಾರ್ಯಕ್ರಮ ನಿರೂಪಿಸಿದರು.
ಮಕ್ಕಳಿಂದ ವಿವಿಧ ಕಾರ್ಯಕ್ರಮಗಳು ಜರಗಿದವು.





Sunday 19 July 2015

ಸಿಪಿಟಿಎ

ಜೂನ್೧೪ ರಿಂದ ಆರಂಭಿಸಿ ನಮ್ಮಎಲ್ಲಾತರಗತಿಗಳ
ಸಿಪಿಟಿಎ ಗಳು ಸಂಪನ್ನಗೊಂಡವು. ಪ್ರತಿತರಗತಿಗಳ
ಅಧ್ಯಕ್ಷರನ್ನು ,ಉಪಾಧ್ಯಕ್ಷರನ್ನು ಚುನಾಯಿಸಲಾಯಿತು.
ಮಕ್ಕಳ ಕಲಿಕಾಪ್ರಗತಿಯ ಕುರಿತು ಚರ್ಚಿಸಲಾಯಿತು.